kannadaprakaash.com

Superstar Darshan Kaatera Movie Review Rating

(superstar darshan new movie kattare combination with tarun sudhir) ನಿರ್ದೇಶಕ ತರುಣ್‌ ಸುಧಿರ್‌ ಮತ್ತು ಚಾಲೇಂಜಿಗ್‌ ಸ್ಟಾರ್‌ ದರ್ಶನ್‌ ನೇತೃತ್ವದಲ್ಲಿ ಈ ಹಿಂದೆ ರಾಬರ್ಟ್‌ ಸಿನಿಮಾ ಬಿಡುಗಡೆ ಮಾಡಿದರು.  ರಾಬರ್ಟ ಸಿನಿಮಾ ಫ್ಯಾನ್ಸ್‌ಗಳಿಗೆ ತುಂಬಾ ಇಷ್ಟವಾಗಿತ್ತು. ಮತ್ತು ಈ ಸಿನಿಮಾ ಬಾಕ್ಸ ಆಫೀಸ್‌ ಮೇಲೆ ಬಹಳ ಚೆನ್ನಾಗಿ ಕಲೇಕ್ಷನ್‌ ಕುಡ ಮಾಡಿತ್ತು, ಇವಾಗ ನಟ ದರ್ಶನ್‌ ಮತ್ತು ನಿರ್ದೇಶಕ ತರುಣ್‌ ಸುಧೀರ್‌ ಕಟೇರಾ ಸಿನಿಮಾಕ್ಕಾಗಿ ಒಂದಾಗಿದ್ದಾರೆ. ಹಿಂದಿನ ಸಿನಿಮಾ ಮ್ಯಾಜಿಕ್‌ ಈ ಸಿನಿಮಾನಲ್ಲಿ ಕೂಡ ಆಗಿದೆಯಾ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.

ಕಾಟೇರ ಕಥೆ ಏನು?

Superstar Darshan Kaatera Movie Review Rating

https://www.instagram.com/reel/C1HKGQWqk1O/

ಕಾಟೇರ ಸನಿಮಾದ ಕಥೆ  1974 ಸಮಯದ ಇದೆ, ಕಾಟೇರ ದರ್ಶನ ಭೀಮನಹಳ್ಳಿ ಎಂಬ ಊರಿನಲ್ಲಿ ಕುಲುಮೆ ಕೆಲಸ ಮಾಡುತ್ತಿರುವ ಯುವಕನಾಗಿದ್ದನು. ದುಡಿಮೆನೇ ದೇವರು ಅಂತ ನಂಬುವ ವ್ಯಕ್ತಿ, ಆದರೆ ಈ ಊರಿನಲ್ಲಿ ಜಮಿನ್ದಾರನ ದಬ್ಬಾಳಿಕೆ ಅತ್ಯಾಚಾರ ಜನರ ಮೇಲೆ ಇರುತ್ತದೆ, ಗೇಣಿದಾರರ ಜೋತೆ ಅನ್ಯಾಯ ಆಗುತ್ತದೆ, ಬೇಳೆ ಬೆಳೆಯುವ ರೈತರ ಜೀವನ ಬದಕಲೂ ಬಹಳ ಕಷ್ಟದಾಯಕ ಆಗಿರುತ್ತದೆ. ಆದರೆ ಆ ಊರಿನಲ್ಲಿ ಅಥಂದ್ದು ಏನಾಗುತ್ತಿರುತ್ತದೆ? ತನ್ನವರ ಮೇಲೆ ಆಗುತ್ತಿರುವ ದಬ್ಬಾಳಿಕೆ ಅತ್ಯಾಚಾರದ ವಿರುದ್ದ ಕಾಟೇರ ಯಾವ ರೀತಿ ಉತ್ತರ ಕೂಡುತ್ತಾನೆ ಎಂಬ ಕೂತಹಲದಿಂದ ಸಿನಿಮಾ ಸಾಗುತ್ತದೆ.

ಈ ಕಥೆಯನ್ನು ಓದಿ ಇದು ಕೂಡ ಹತ್ತರಲ್ಲಿ ಹನ್ನೊಂದು ಅನ್ನೋ ಹಾಗಿಲ್ಲ, ಕಾಟೇರ ಕಥೆ ಕೇಳುವದಲ್ಲಿ ಎಲ್ಲರಿಗೂ ಸಾಮನ್ಯ ಅನಿಸುತ್ತದೆ, ಆದರೆ ಇಲ್ಲಿ ಬಹಳ ವಿಚಾರಗಳನ್ನು ವ್ಯಕ್ತ ಮಾಡಿದ್ದಾರೆ. ಇದರ ಪ್ರಮಾಣ ತರುಣ್‌ ಸುಧೀರ್‌ ಅವರ ಬುದ್ದಿವಂತಿಕೆ ಮತ್ತು ಚಿತ್ರಕಥೆಯಾ ಸಾಕ್ಷಿ. 70ರ ದಶಕದ ಸಮಯದಲ್ಲಿ ಆದ ಹಲವು ಸಾಮಾಜಿಕ ಪಿಡುಗುಗಳನ್ನು (ಈ ಸಮಯದಲ್ಲಿ ಕೂಡ ಇರುವಂತಹವು) ಇದನ್ನು ಸಿನಿಮಾದೊಳಗೆ ದಾಟಿಸಿದ್ದಾರೆ. ಆ ಯಾವ ವಿಚಾರಗಳು ಸಿನಿಮಾದ ಕಥೆಗೆ ಭಾರವಾಗದಂತೆ ಹೇಳಬೇಕಾದ ವಿಷಯವನ್ನು ಪ್ರಬಲವಾಗಿಯೇ ಪರಿಣಾಮಕಾರಿಯಾಗಿಯೇ ಸಿನಿಮಾದ ಪರ್ದೇ ಮೇಲೆ ತಂದಿದ್ದಾರೆ. ಹಾಗೆ ಇಂತಹ ವಿಚಾರಗಳನ್ನು ವ್ಯಕ್ತಮಾಡುವದಕ್ಕೆ ಒಬ್ಬ ನಟ ಸ್ಟಾರ ಜೊತೆ ಪ್ರಯೋಗ ಒಡ್ಡಿರುವದಕ್ಕಾಗಿ ನಿರ್ದೇಶಕ ತರುಣ್‌ ಅವರ ಮೆಚ್ಚುಗೆ ಸಲ್ಲಿಸಬೇಕು. ಕಾಟೇರ ಕೋರಗಿಗೆ ಸಮಾಧಾನ ಹೇಳಿದ್ದಾನೆ, ನಮ್ಮ ಪೂರ್ವಜರ ಕಥೆ ಮತ್ತು ನಮ್ಮ ನೆಲದ ಕಥೆಗಳು ಕನ್ನಡ ಸ್ಕ್ರೀನ್‌ ಮೇಲೆ ಬರುತ್ತಿಲ್ಲ ಎಂದು ಹೇಳಿದ್ದಾನೆ.

ಕಾಟೇರ ಸಿನಿಮಾದ ಬರವಣಿಗೆ ವಿಚಾರದಲ್ಲಿ ತ್ರಿಮೂರ್ತಿಗಳ ಕೈಚಳಕವಿದೆ. ತರುಣ್‌ ಸುಧೀರ್‌ ಮತ್ತು ಜಡೇಶ್‌ ಕೆ ಹಂಪಿ ಅವರು ಸ್ಕ್ರೀಪ್ಟ ವಿಚಾರದಲ್ಲಿ ತಮ್ಮ ಸಾಮ‍ರ್ಥ್ಯವನ್ನು ಸಾಬಿತುಪಡಿಸಿದ್ದರು. ಅದೇ ರೀತಿ ಮಸ್ತಿ ಮತ್ತು ಸಂಭಾಷಣೆ ವಿಚಾರದಲ್ಲಿ ಮತ್ತೋಮ್ಮೆ ಸಿಕ್ಸರ್‌ ಬಾರಿಸಿದ್ದಾರೆ. ಸಾರ್ಥಕ ಕಥೆಯಲ್ಲಿ ಒಂದು ಅರ್ಥಪೂರ್ಣ ಮಾತುಗಳನ್ನು ಪೋಣಿಸಿ ಕಾಟೇರ ಕಥೆಯ ಸೌಂದರ್ಯವನ್ನು ಹೆಚ್ಚಿಸಿದ್ದಾರೆ. ತರುಣ ಸುಧೀರ್‌ ಅವರ ಕಲ್ಪನೆಯ ವಿಚಾರದ ಅನುಸಾರ ಸುಧಾಕರ್‌ ಎಸ್‌.ರಾಜ ಛಾಯಗ್ರಹಣದ ಕೆಲಸ ಇದೆ. ಜಾತಿಯ ಹೆಸರಿನಲ್ಲಿ ಜನರ ಮಧ್ಯೆ ಶೋಷಣೆ, ರೈತರ ಸಮಸ್ಯೆಗಳು, ಅಸಭ್ಯ ಕೊಲೆಗಳ ಆಲೋಚನೆಗಳು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಈ ಸಿನಿಮಾ ಮನುಷ್ಯತ್ವ ಸಂಭಂಧಗಳ ಬಗ್ಗೆ ಕೂಡ ಮಾತಾಡುತ್ತದೆ.

ಮೈಕೊಡವಿ ಎದ್ದುನಿಂತ ದರ್ಶನ

Superstar Darshan Kaatera Movie Review Rating

ನಟ ದರ್ಶನ ಕಾಟೇರ್‌ ಸಿನಿಮಾದಲ್ಲಿ ಒನ್‌ ಮ್ಯಾನ್‌ ಶೋನಂತೆ ಮಿಂಚಿರುವುಂತೆ ಕಾಣುತ್ತದೆ. ಬಹಳ ದಿನಗಳ ಸಮಯದ ನಂತರ ಅವರು ನಿಜವಾಗಿಯೂ ನಟನೆಗೆ ಒತ್ತು ನೀಡಿದ ಪಾತ್ರದಲ್ಲಿ ಬದುಕಿದ್ದಾರೆ. ಕಾಟೇರ ಕಥೆಯ ಗಾಂಬೀರ್ಯತೆಯನ್ನು ಅರ್ಥಮಾಡಿಕೊಂಡು ನಟ ಅವರು ತಮ್ಮ ಇಮೇಜ್‌ ಅನ್ನು ಬದಿಗಿಟ್ಟು ಕಾಟೇರ ಸಿನಿಮಾದ ಪಾತ್ರವನ್ನು ನಿರ್ವಹಿಸಿದ್ದರು. ಎರಡು ಬಣ್ಣಗಳಲ್ಲಿ ಆಡುವ ಅಭಿಮಾನಿಗಳಿಗೆ ಇದು ಡಬಲ್‌ ಟ್ರೀಟ್‌ ಆಗಿರಬಹದು. ಭಟ್ಟಿಗೆ ಗುರಿ ಇಟ್ಟು, ಎದುರಾಳಿಗಳ ಎದುರು ಚಪ್ಪಾಳೆ, ತಟ್ಟುವ ಭಾವುಕ ಸನ್ನಿವೇಶಗಳಲ್ಲಿ ಕಣ್ಣೀರು ಸುರಿಸಿ ಅಭಿಮಾನಿಗಳ ಮನ ಮುಟ್ಟುವ ಕನ್ನಡ ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ಗೆ ಫುಲ್‌ ಮಾರ್ಕ್ಸ್‌. ʼಭಕ್ತ ಪ್ರಹ್ಲಾದ್‌ʼ ಚಿತ್ರದ ಸಂಭಾಷಣೆಯ ದೃಷ್ಯಗಳು, ಮೊದಲಾರ್ಧದ ಎರಡು ಫೈಟಗಳು ತುಂಬಾ ಮನರಂಜನೆ ನೀಡುತ್ತದೆ. ಕನ್ನಡ ಸುಪರಸ್ಟಾರ್‌ ದರ್ಶನ್‌ ಇಲ್ಲಿಯವರೆಗೆ ತೆರೆಯ ಮೇಲೆ ಕಂಡದ್ದಕ್ಕಿಂತ ಭಿನ್ನವಾಗಿ ಇಲ್ಲಿ ಮಿಂಚಿದ್ದಾರೆ. ಅಲ್ಲದೆ ಅನೇಕ ಅನುಭವಿ ಕಲಾವಿಧರೂ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಹಾಗಾಗಿ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಜಾಣತನದಿಂದ ನಿರ್ವಹಿಸುತ್ತಿದ್ದಾರೆ. ನಟ ಧ್ರವನಿಗೂ ಕೂಡ ಚಿತ್ರದಲ್ಲಿ ವಿಶೇಷ ಪಾತ್ರ ಸಿಕ್ಕಿದ್ದು. ಅದನ್ನು ನಟ ಅಷ್ಟೇ ಚೆನ್ನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಭಾತ್ರತ್ವ ಮತ್ತು ತಾಯ್ತನದ ಜೊತೆಗೆ ಫಿಲಾಸಫಿ ಕೂಡ ಇದೆ. ರೋಹಿತ್‌ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ.

ವಿ. ಹರಿಕೃಷ್ಣ ಮಿಸಿಂಗ್‌

Superstar Darshan Kaatera Movie Review Rating

ನಾವು ನಟ ದರ್ಶನ ಮತ್ತು ವಿ.ಹರಿಕೃಷ್ಣ ಅವರ ಕಾಂಬಿನೇಷನಲ್ಲಿ ಹಲವು ಸುಪರಹೀಟ್‌ ಹಾಡುಗಳನ್ನು ಕೇಳಿದ್ದೇವೆ.  ಆದರೆ ಸಿನಿಮಾ ಕಾಟೇರ್‌ ಚಿತ್ರದಲ್ಲಿ ಅಭಿಮಾನಿಗಳಿಗೆ ಸ್ವಲ್ಪ ಕೊಂಚ ಬೇಸರವಾಗುತ್ತದೆ. ಎಂದಿನಂತೆ ಈ ಚಿತ್ರದಲ್ಲಿ  ವಿ.ಹರಿಕೃಷ್ಣ ಅವರ ಕೆಲಸ ಅಷ್ಟಾಗಿ ಹೈಲಾಟ್‌ ಆಗಿಲ್ಲ. ಈಗ ನಾಯಕಿ ಪಾತ್ರಕ್ಕೆ ಆರಾಧಾನ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಮೊದಲ ಚಿತ್ರದಲ್ಲೇ ಉತ್ತಮ ಸ್ಕ್ರೀನ್‌ ಸ್ಪೇಸ್‌ ಮತ್ತು ನಟನೆಗೆ ಹೆಚ್ಚು ಸ್ಕೋಪ್‌ ಇರುವ ಪಾತ್ರ ಸಿಕ್ಕದೆ.  ಆದಾಗ್ಯೂ, ಆರಾಧಾನೆಯು ತತ್ವಶಾಸ್ತ್ರದೊಂದಿಗೆ ಅಷ್ಟೇನೂ ಸ್ಪರ್ಧಿಸುವುದಿಲ್ಲ. ಚಿತ್ರದ ಅವಧಿಯನ್ನು  ಸ್ವಲ್ಪ ಕಡಿಮೆ ಮಾಡುವ ಅವಕಾಶಗಳು ಬಂದವು. ಮೊದಲಾರ್ಧದ ಅನಗತ್ಯ ಹಾಡುಗಳಿಗೆ ಕತ್ತರಿ ಹಾಕಿದ್ದರೆ, ಕಾಟೇರದ ಅಭಿನಯ ಇನಷ್ಟು ಮೆರೆಯುತ್ತಿತ್ತು. ಒಟ್ಟಿನಲ್ಲಿ ಮೇಳ ಚಿತ್ರಗಳನ್ನು ಇಷ್ಟಪಡುವ ಸಿನಿಪ್ರಿಯರಿಗೆ ಕಾಟೇರ ಸಂಪೂರ್ಣ ಫುಲ್‌ ಮೀಲ್ಸ್‌, ಭರ್ಜರಿ ಎಂಟೆರಟೇನಮೆಂಟ್‌, ಮನರಂಜನೆಯ ಜೊತೆಗೆ ಸಂದೇಶವನ್ನು ಕಾಟೇರ್‌ ನೀಡುತ್ತದೆ.

Leave a Comment